Chief Editor
Manohar. R (Manu)
Photo Journalist
chitrataramanu@gmail.com
+91 9845549026
?ಸ್ಮಗ್ಲರ್ ಸಾಂಗ್
Posted date: 29 Wed, Aug 2012 ? 10:58:38 AM

ರೈನ್‌ಬೋ ಗ್ರೂಪ್ಸ್ ಲಾಂಛನದಲ್ಲಿ ಗೌರಮ್ಮ ಹಾಗೂ ಪ್ರಿಯಾಹಾಸನ್ ನಿರ್ಮಿಸುತ್ತಿರುವ ‘ಸ್ಮಗ್ಲರ್ ಚಿತ್ರಕ್ಕಾಗಿ ಆನಂದಪ್ರಿಯ ಅವರು ಬರೆದಿರುವ ‘ವರವಾಗಿ ಬಂದೆ ಹೊಸಜೀವ ತಂದೆ ನವೀರಾದ ಈ ಮನಸ್ಸಿಗೆ ಮರುಜೀವ ತಂದೆ ಎಂಬ ಹಾಡಿನ ಚಿತ್ರೀಕರಣ ರಾಕ್‌ಲೈನ್ ಸ್ಟುಡಿಯೋದಲ್ಲಿ ನಡೆಯಿತು. ಪ್ರಿಯಾಹಾಸನ್, ರಮಣ ಹಾಗೂ ನರ್ತಕರು ಪ್ರೇಮ ನೃತ್ಯ ನಿರ್ದೇಶನ ಮಾಡಿದ ಈ ಹಾಡಿಗೆ ಹೆಜ್ಜೆ ಹಾಕಿದರು.
    ‘ಜಂಭದ ಹುಡುಗಿ,  ‘ಬಿಂದಾಸ್ ಹುಡುಗಿ ಚಿತ್ರಗಳ ನಂತರ ಪ್ರಿಯಾಹಾಸನ್ ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕರಾಗಿ ರಮಣ ಅಭಿನಯಿಸುತ್ತಿದ್ದಾರೆ. ಶಯ್ಯಾಜಿಶಿಂಧೆ, ಹ್ಯಾರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
     ಕೆ.ವೀರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಹದೇವ್ ಅವರ ಛಾಯಾಗ್ರಹಣವಿದೆ. ಚಕ್ರಿ ಸಂಗೀತ ನಿರ್ದೇಶನ, ರಾಂಲಕ್ಷ್ಮಣ್ ಸಾಹಸ ನಿರ್ದೇಶನ ಹಾಗೂ ರಾಮಣ್ಣನವರ ನಿರ್ಮಾಣನಿರ್ವಹಣೆ ‘ಸ್ಮಗ್ಲರ್ ಚಿತ್ರಕ್ಕಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ?ಸ್ಮಗ್ಲರ್ ಸಾಂಗ್ - Chitratara.com
Copyright 2009 chitratara.com Reproduction is forbidden unless authorized. All rights reserved.